•  
  •  
  •  
  •  
Index   ವಚನ - 1290    Search  
 
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿದಿರಿ; ಲಿಂಗವಾಗಿ ಬಂದೆನೆಗೆ ಮನದ ಮಲಿನವ ಕಳೆದಿರಿ; ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ. ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ. ಇನ್ನೆನಗತಿಶಯವೇನೂ ಇಲ್ಲ.
Transliteration Guruvāgi bandenege dīkṣeya māḍidiri; liṅgavāgi bandenege manada malinava kaḷediri; jaṅgamavāgi bandenna prapan̄cakatanava kaḷedu parama sīmeya māḍidiri. Intivellavū basavaṇṇanāgi enage prasādava nīḍi salahida, kapilasid'dhamallikārjuna. Innagatiśayavēnū illa.