ವಚನ - 1296     
 
ಅಂಗೈಯ ನೋಟದೊಳು ಕಂಗಳು ನಟ್ಟು, ಕಂಗಳ ತೇಜ ಲಿಂಗದಲ್ಲರತು, ಲಿಂಗದ ಪ್ರಭೆಯೊಳಗೆ ಅಂಗವೆಲ್ಲ ಲೀಯವಾಗಿ, ಸಂಗ ನಿಸ್ಸಂಗವೆಂಬ ದಂದುಗ ಹರಿದು, ಹಿಂದು ಮುಂದೆಂಬ ಭಾವವಳಿದು ನಿಂದ, ನಿಜದ ನಿರಾಳದಲ್ಲಿ ಪ್ರಾಣ ಸಮರತಿಯಾಗಿಪ್ಪ ಕಪಿಲಸಿದ್ಧಮಲ್ಲಿನಾಥನಲ್ಲಿ, ಪ್ರಭುದೇವರ ಶ್ರೀಪಾದಕ್ಕೆ `ನಮೋ ನಮೋ' ಎಂದು ಬದುಕಿದೆ ಕಾಣಾ, ಚೆನ್ನಬಸವಣ್ಣಾ.