ವಚನ - 1295     
 
ಸೋಹಂ ನೀನೆ ಎಲೆ ಅಯ್ಯಾ; `ಕೋಹಂ' ತತ್ತ್ವತೂರ್ಯಾರ್ಥವೂ ನೀನೆ ಅಯ್ಯಾ. `ನಾಹಂ ನಾಹಂ' ನೀನೆ ಅಯ್ಯಾ. ಆನೆಂಬುದೊಂದು ಭ್ರಾಂತುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಗುರುವಿನ ಕೈಯಲು ಆನು ಸತ್ತು ಹುಟ್ಟಿದ ಬಳಿಕ ಆನು ನೀನೆಂಬ ಸಂದನಳಿದೆ.