ವಾಣಿ ನಾಲ್ಕರ ಮೇಲೆ ಮಾಣದೆ ನುಡಿವ
ನಿರ್ವಾಣಿಯ ಸಂಭಾಷಣೆಯ ಮಾಡಬಲ್ಲಡೆ ನಿರ್ವಾಣ.
ವರ್ಣವೇಳರೊಳಗೆ ಪರಿಪೂರ್ಣವಾಗಿಪ್ಪ
ಮಹಾವರ್ಣವ ತನ್ಮಯವ ಮಾಡಬಲ್ಲಡೆ ನಿರ್ವಾಣ.
ಸ್ಥಾನ ಹತ್ತರಲ್ಲಿ ಆನಂದ ಸಿಂಹಾಸನದ
ನಾನಾ ಬೆಳಗಿನ ಬೀಜದ ತಿರುಳನನುಭವಿಸಬಲ್ಲಡೆ
ಲಿಂಗಾನುಭಾವಿ.
ಪ್ರಣವ ಹತ್ತರಲ್ಲಿ ಧ್ಯಾನಚತುಷ್ಟಯ ಕೂಡಿದಲ್ಲಿಯ
ಕೀಲಬಲ್ಲಡೆ ಲಿಂಗೈಕ್ಯ.
ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಚೆನ್ನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ
ಎನುತಿರ್ದೆನು.
Art
Manuscript
Music
Courtesy:
Transliteration
Vāṇi nālkara mēle māṇade nuḍiva
nirvāṇiya sambhāṣaṇeya māḍaballaḍe nirvāṇa.
Varṇavēḷaroḷage paripūrṇavāgippa
mahāvarṇava tanmayava māḍaballaḍe nirvāṇa.
Sthāna hattaralli ānanda sinhāsanada
nānā beḷagina bījada tiruḷananubhavisaballaḍe
liṅgānubhāvi.
Praṇava hattaralli dhyānacatuṣṭaya kūḍidāḷaya
kīlaballaḍe liṅgaikya.
Idu kāraṇa, kapilasid'dhamallikārjunayya,
nim'ma śaraṇa cennabasavaṇṇana
śrīpādakke namō namō
enutirdenu.