ಅಂಗೈಯ ನೋಟದೊಳು ಕಂಗಳು ನಟ್ಟು,
ಕಂಗಳ ತೇಜ ಲಿಂಗದಲ್ಲರತು,
ಲಿಂಗದ ಪ್ರಭೆಯೊಳಗೆ ಅಂಗವೆಲ್ಲ ಲೀಯವಾಗಿ,
ಸಂಗ ನಿಸ್ಸಂಗವೆಂಬ ದಂದುಗ ಹರಿದು,
ಹಿಂದು ಮುಂದೆಂಬ ಭಾವವಳಿದು ನಿಂದ,
ನಿಜದ ನಿರಾಳದಲ್ಲಿ ಪ್ರಾಣ ಸಮರತಿಯಾಗಿಪ್ಪ
ಕಪಿಲಸಿದ್ಧಮಲ್ಲಿನಾಥನಲ್ಲಿ,
ಪ್ರಭುದೇವರ ಶ್ರೀಪಾದಕ್ಕೆ `ನಮೋ ನಮೋ' ಎಂದು
ಬದುಕಿದೆ ಕಾಣಾ, ಚೆನ್ನಬಸವಣ್ಣಾ.
Transliteration Aṅgaiya nōṭadoḷu kaṅgaḷu naṭṭu,
kaṅgaḷa tēja liṅgadallaratu,
liṅgada prabheyoḷage aṅgavella līyavāgi,
saṅga nis'saṅgavemba daṇḍuga haridu,
hindu mundemba bhāvavaḷidu nindu,
nijada nirāḷadalli prāṇa samaratiyāgippa
kapilasid'dhamallināthanalli,
prabhudēvara śrīpādakke `namō namō' enda
badukide kāṇā, cennabasavaṇṇā.