ವಚನ - 1299     
 
ನೀವು ಮಹಿಮರು; ನಿಮ್ಮ ಮಹಿಮೆ ತಿಳಿಯದು ನೋಡಯ್ಯಾ. ನಿಮ್ಮ ಸತ್ವವೆ ಬಸವಣ್ಣನು, ನಿಮ್ಮ ಜ್ಞಾನವೆ ಚೆನ್ನಬಸವಣ್ಣನು, ನಿಮ್ಮ ರಾಣಿಯರೆ ಅಕ್ಕನಾಗಮ್ಮನು, ನಿಮ್ಮ ಮಹತ್ವವೆ ಪ್ರಭುದೇವರು ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.