•  
  •  
  •  
  •  
Index   ವಚನ - 1303    Search  
 
ಅಯ್ಯಾ, ಮೂರು ಪುರದ ಮೇಲುಪ್ಪರಿಗೆಯ ಕೆಲಸವನೇನೆಂಬೆನಯ್ಯಾ! ಮುತ್ತಿನ ಕಳಸದ ಮೇಲೊಂದು ಅರಳಿದ ಪುಷ್ಪದ ಪರಿಯೊಳಗೆ ಅಗ್ನಿಯ ಕಂಡೆನಾಗಿ, ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಚೆನ್ನಬಸವಣ್ಣ ತೋರಿದ ಹಾದಿ ಸುಪಥವಾಯಿತ್ತಾಗಿ, ನಾನು ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
Transliteration Ayya, mūru purada mēlupparigeya kelasavanēnembenayyā! Muttina kaḷasada mēlondu araḷida puṣpada pariyoḷage agniya kaṇḍenāgi, kapilasid'dhamallinātha, nim'ma śaraṇa cennabasavaṇṇa tōrida hādi supathavāyittāgi, nānu cennabasavaṇṇaṅge namō namō enutirdenu.