ಆಜ್ಞಾಸಿದ್ಧನನರ್ಚಿಸುವಲ್ಲಿ ಆರಯ್ಯಾ ಬಲ್ಲವರು,
ಚೆನ್ನಬಸವಣ್ಣನಲ್ಲದೆ?
ಮೂರ್ತಿಯೆಂಟು ಆಗದ ಮುನ್ನ ಮುಖಲಿಂಗವಾಗಿರ್ದ
ಸುದ್ದಿಯನಾರಯ್ಯ ಬಲ್ಲವರು, ಚೆನ್ನಬಸವಣ್ಣನಲ್ಲದೆ?
ಸದಮಲಜ್ಞಾನದಲ್ಲಿ ಒಪ್ಪಿಪ್ಪ ಅಕ್ಷರದ್ವಯದ
ಭೇದಾದಿ ಭೇದವ ಭೇದಿಸಿ
ಲೋಕಕ್ಕೆ ಭಕ್ತಿಯ ಸಾಧಿಸಿಕೊಟ್ಟು
ಲೋಕಕ್ಕೆ ಉರುತರ ಗುರುವಾದ
ಕಾರಣ ಚೆನ್ನಬಸವಣ್ಣನೈ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ājñāsid'dhananarcisuvalli ārayyā ballavaru,
cennabasavaṇṇanallade?
Mūrtiyeṇṭu āgada munna mukhaliṅgavāgirda
suddiyanārayya ballavaru, cennabasavaṇṇanallade?
Sadamalajñānadalli oppippa akṣaradvayada
bhēdādi bhēdava bhēdisi
lōkakke bhaktiya sādhisikoṭṭu
lōkakke urutara guruvāda
kāraṇa cennabasavaṇṇanai,
kapilasid'dhamallikārjunā.