ಎಲೆ ಎಲೆ ಅಯ್ಯಾ, ನೀವು ಹೇಳಿರಯ್ಯಾ,
ಎನಗೆ ಗತಿಯೇನು? ಮತಿಯೇನು?
ನಿಮ್ಮಲ್ಲಿ ಸಮರಸವೆಂತು ಹೇಳಯ್ಯಾ.
ಮೂರನೆಯ ಕರುಮಾಡದ
ಮೇಲುವಾಗಿಲ ಮನೆಯೊಳಗಿಪ್ಪೆನೊ ನಾನು.
ಚೌಕಮಧ್ಯದ ಎಂಟೆಸಳ ಮೊನೆಯ ಮೋಹರದ
ನಡುವಣ ಕೋಣೆಯೊಳಗಿಪ್ಪೆನೊ ನಾನು.
ಕಾಮನ ಕಟ್ಟುವ ಪಂಜರವ ಬಿಟ್ಟು ನಿಲುವೆನೊ,
ಬಿಡದೆ ನಿಲುವೆನೊ?
ಹೇಳು ಹೇಳಾ ನಿರ್ಣಯವ,
ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ele ele ayyā, nīnu hēḷirayyā,
enage gatiyēnu? Matiyēnu?
Nim'malli samarasaventu hēḷayyā.
Mūraneya karumāḍada
mēluvāgila maneyoḷagippeno nānu.
Caukamadhyada eṇṭesaḷa moneya mōharada
naḍuvaṇa nānu.̔Oḷagippeno
kāmana kaṭṭuva pan̄jarava biṭṭu niluveno,
biḍade niluveno?
Hēḷu hēḷā nirṇayava,
ele kapilasid'dhamallināthayya.