Index   ವಚನ - 1315    Search  
 
ನೀ ಮುನಿದಡೆ ಮುನಿ:ನಾನೆನ್ನುವೆನಯ್ಯಾ ಮೀರಿದ ವಚನವ. ನೀ ಮಾಡಲಾದವು:ನಾನೇನು ಹೇಳಿದೆನೆ ಅಯ್ಯಾ? ಇಲ್ಲಿಲ್ಲವು! ಬಹು ದುರ್ಲಭ, ಬಹು ದುರ್ಲಭ ನಿನ್ನ ಸ್ಥಳವಳವಡುವುದು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.