Index   ವಚನ - 1330    Search  
 
ಲಿಂಗವ ಪೂಜಿಸಹೋದಡೆ ಲಿಂಗರೂಪಾದೆನು. ಜಂಗಮವ ಪೂಜಿಸಹೋದಡೆ ಪ್ರಭುವಾದೆನು. ಗುರುವ ಪೂಜಿಸಹೋದಡೆ ಚೆನ್ನಬಸವಣ್ಣನಾದೆನು. ಎನಗಾಜ್ಞೆಯಾದಡೆ ಬರಿಯ ಸಿದ್ಧರಾಮನಾಗಿ ನಿಂದೆನು ನೋಡಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣರ ಸಮೂಹದಲ್ಲಿ.