ಮಾತುಳ್ಳನ್ನಕ್ಕ ದೇಹ ಹಿಂಗದು;
ನೆನಹುಳ್ಳನ್ನಕ್ಕ ಪ್ರಾಣ ಸೂತಕ ಬಿಡದು;
ಕಾಯದ ಜೀವದ ಹೊಲಿಗೆಯ ಸಂದ ಬಿಚ್ಚಲರಿಯದು;
ಆನು ನಿರ್ದೇಹಿ ಎಂದಡೆ ನಗರೆ ನಿಮ್ಮ ಪ್ರಮಥರು?
ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ,
ನಿಮ್ಮಂತೆ ಮಾಡಿದಡಾನುಳಿವೆನಲ್ಲದೆ
ಬೇರೆ ಗತಿಯ ಕಾಣೆ ನೋಡಾ,
ಅಯ್ಯಾ, ಕಪಿಲಸಿದ್ಧಮಲ್ಲಿನಾಥಾ.
Art
Manuscript
Music
Courtesy:
Transliteration
Mātuḷḷannakka dēha hiṅgadu;
nenahuḷḷannakka prāṇa sūtaka biḍadu;
kāyada jīvada holigeya sanda biccalariyadu;
ānu nirdēhi endaḍe nagare nim'ma pramatharu?
Enna antaraṅgadaluḷḷa avaguṇava hiṅgisi,
nim'manteḍānuḷivenallade
bēre gatiya kāṇe nōḍā,
ayyā, kapilasid'dhamallināthā.