•  
  •  
  •  
  •  
Index   ವಚನ - 1339    Search  
 
ಎಮ್ಮ ನಲ್ಲನೊಲಿದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ' ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು.
Transliteration Em'ma nallanolidu olisi kāḍtire, `bārā bārā' endenna karaṇa haraṇava tōridaḍe tāne olidu bandenna taleya piḍidu negahi, enna manege banda kapilasid'dhamallināthana olumeya ghanavēnendupamisuvenu.