ವಚನ - 1352     
 
ಬೆರಸಿ ಬೆಚ್ಚಾತನ ಕಂಡೆನೆಂಬೆನಯ್ಯಾ; ಆತನ ಬಟ್ಟೆಯ ಕಾಣೆ ನೋಡಯ್ಯಾ. ಶರೀರವಿಡಿದಿಪ್ಪ ಶತಕೋಟಿ ಜೀವಂಗಳ ಭೇದವನರಿಯೆನು; ನಿಮ್ಮ ನಾನೆತ್ತ ಬಲ್ಲೆನಯ್ಯಾ? ನೀವು ಮಾಡಿದ ಬೆಂಬಳಿಯಲ್ಲಿ ಹೊರೆಗಾಣಲಾಪೆನಲ್ಲದೆ ನಾಂ ಬೇರೆ ಕಾಂಬುದು ಹುಸಿ! ನೀ ತೋರಯ್ಯಾ ಎನಗೆ, ಕಪಿಲಸಿದ್ಧಮಲ್ಲಿನಾಥಯ್ಯಾ.