•  
  •  
  •  
  •  
Index   ವಚನ - 1354    Search  
 
ಕಾಯವಿಡಿದಿಹನ್ನಕ್ಕರ ಕಾಮವೆ ಮೂಲ; ಜೀವವಿಡಿದಿಹನ್ನಕ್ಕರ ಕ್ರೋಧವೆ ಮೂಲ; ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೆ ಮೂಲ. ಎನ್ನ ಆಸೆ ಘಾಸಿಮಾಡುತ್ತಿದೆ, ಶಿವಯೋಗದ ಲೇಸಿನ ಠಾವ ತೋರು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāyaviḍidihannakkara kāmave mūla; jīvaviḍidihannakkara krōdhave mūla; vyāptiyuḷḷannakkara sakala viṣayakke āseye mūla. Enna āse ghāsimāḍuttide, śivayōgada lēsina ṭhāva tōru, kapilasid'dhamallikārjunā.