ವಚನ - 1362     
 
ಎನ್ನ ಮನದಲ್ಲಿ ಮತ್ತೊಂದಕ್ಕಿಂಬಿಲ್ಲ ಕಂಡಯ್ಯಾ. ನಿಮ್ಮ ನೆನೆವೆ ನಾನು, ನೀನು ಎನ್ನ ನೆನೆವೆ ಕಂಡಯ್ಯಾ. ನಿನಗೆಯೂ ಎನಗೆಯೂ ಒಮ್ಮನ ನೋಡಯ್ಯಾ. ನೀ ಮನಮುಕ್ತನಾದ ಕಾರಣ, ನಿನ್ನೊಡನೆ ಎನ್ನ ಮನಮುಕ್ತನ ಮಾಡಯ್ಯಾ, ಕಪಿಲಸಿದ್ಧಮಲ್ಲಿನಾಥ.