Index   ವಚನ - 1361    Search  
 
ನಾದ ಬಿಂದುವೆಂಬಲ್ಲಿ ಅಂಗ ಲಿಂಗ ಸಂಬಂಧವೆಂಬೆನಯ್ಯಾ, ನಾದ ಪ್ರಾಣ, ಬಿಂದು ಕಾಯವಾದ ಕಾರಣ. ನಾದ ಸ್ವರವಲ್ಲ, ಬಿಂದು ಕಾಯವಲ್ಲ ; ಉಭಯ ಸೂತಕರಹಿತ ಕಂಡಯ್ಯಾ. ನಾದ ಬಿಂದುವಿನ ಒಡ್ಡ ತೋರಿ ಮನ ಮಗ್ನವಾದ ನಿಲವ ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೆ ಬಲ್ಲೆ.