ವಚನ - 1363     
 
ಮನಮಗ್ನಯೋಗವೆಂದಡೇನು ಕೊರತೆ? ಹೇಳಾ, ಎಲೆ ಅಯ್ಯಾ. ಮನವಿಲ್ಲದ ಬಚ್ಚಬರಿಯ ಬೊಮ್ಮವೆಂದಡೇನು? ಹೇಳಾ, ಎಲೆ ಅಯ್ಯಾ. ನುಡಿದ ಮಾತಿನಲ್ಲಿ ವಿವರ ತೋರುತ್ತಿದೆ ಎಂದಡೆ ತಾತ್ಪರ್ಯವಂತಪ್ಪುದೆ, ಕಪಿಲಸಿದ್ಧಮಲ್ಲಿಕಾರ್ಜುನಾ?