•  
  •  
  •  
  •  
Index   ವಚನ - 1365    Search  
 
ಅಯ್ಯಾ, ನಿಮ್ಮ ದೇವರೆಂದು, ಭಾವಿಸಲರಿಯೆನು, ಕೇಳು ಕಂಡಾ. ಎನ್ನ ಮನವ ನುಂಗಿದೆ ಎಂದು, ನಿಮಗಾನು ಬಿನ್ನಹವ ಮಾಡಿದ ಕಾರಣ, ಎನ್ನ ಒಳಹೊರಗೆಲ್ಲಾ ನೀನೆ ಕಂಡಯ್ಯಾ. ನಿಮ್ಮೊಳಗೆ ಅಡಗಿದ ನುಡಿಯನೊಳಕೊಂಡ ಅರಿವ ಅರಿದರಿದು ಮರೆದ ಪರಿ ಎಂತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ayya, nim'ma dēvarendu, bhāvisalariyenu, kēḷu kaṇḍā. Enna manava nuṅgide endu, nimagānu binnahava māḍida kāraṇa, enna oḷahoragella nīne kaṇḍayya. Nim'moḷage aḍagida nuḍiyanoḷakoṇḍa ariva aridaridu mareda pari entayyā, kapilasid'dhamallināthayya.