Index   ವಚನ - 1387    Search  
 
ಕಲ್ಪವೃಕ್ಷಕ್ಕೆ ಸಮಮಾಡಿ ಹೇಳಿದೆನಯ್ಯಾ, ಕರಸ್ಥಲದ ಮಹಾಲಿಂಗಮೂರ್ತಿಗೆ. ಅಲ್ಲಲ್ಲ, ಕಲ್ಪಿಸಿ ಬೇಡಿದಡೆ ಕೊಡುವುದದು ಸುರಾಮೃತವ; ಮೃತ [ವ] ಬೇಡಿದಡೆ ಕೊಡುವುದಯ್ಯಾ ಭವದ ಗೋಳಾಟ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.