ನಾಲ್ಕು ಯುಗಂಗಳು ಸಹಸ್ರ ವೇಳೆ ತಿರುಗಿದಡೆ,
ಬ್ರಹ್ಮಂಗೊಂದು ದಿನ.
ಬ್ರಹ್ಮನಂದು ಸಹಸ್ರ ವೇಳೆ ತಿರುಗಿದಡೆ,
ವಿಷ್ಣುವಿಗೊಂದು ಗಳಿಗೆ.
ವಿಷ್ಣು ತಾನು ಹನ್ನೆರಡು ಲಕ್ಷ[ವೇಳೆ]ತಿರುಗಿದಡೆ,
ಮಹೇಶ್ವರಂಗೊಂದು ನಿಮಿಷ.
ಅಂತಪ್ಪ ಮಹೇಶ್ವರರನೇಕ ಲೀಲೆ ಧರಿಸಿದಲ್ಲಿ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ ಸಮಾಪ್ತಿ,
ನೋಡಯ್ಯಾ ಬಾಚರಸರೆ.