Index   ವಚನ - 1395    Search  
 
ನಿನ್ನ ದೇಹ ನೋಡುವಡೆ ಪಂಚಭೌತಿಕ, ನೀ ನೋಡುವಡೆ ಜೀವಾಂಶಿಕ; ನಿನ್ನ ಧನ ನೋಡುವಡೆ ಕುಬೇರನದು, ನಿನ್ನ ಮನ ನೋಡುವಡೆ ವಾಯುವ ಕೂಡಿದ್ದು ; ವಿಚಾರಿಸಿ ನೋಡಿದಡೆ ಬ್ರಹ್ಮನದು. ನಾ ಮಾಡುವೆನೆಂದಡೆ ಅದು ಆದಿಶಕ್ತಿ ಚೈತನ್ಯ ; ನಾ ತಿಳಿದಿಹೆನೆಂದಡೆ ಅದು ಜ್ಞಾನದ ಬಲ. ಆ ಜ್ಞಾನವು ನಾ ಎಂದಡೆ ಇದಿರಿಟ್ಟು ತೋರುತ್ತದೆ. ತೋರುವ ಆನಂದಮೂರ್ತಿ ನಾ ಎಂದಡೆ ಅದು ಸಾಕ್ಷಿಯಾಗಿ ನಿಂದಿತ್ತು. ಸಾಕ್ಷಿ ಎಂಬುದು ತಿಳಿದು ತಿಳಿಯದೆಂಬುದಕ್ಕೆ, ಬಯಲಾದ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಂದೆಯು.