ವಚನ - 1398     
 
ಲಿಂಗ ನೋಡುವಡೆ ಮೈಗೊಟ್ಟುದಯ್ಯಾ ಷೋಡಶೋಪಚಾರಂಗಳಿಗೆ. ಜಂಗಮ ನೋಡುವಡೆ, ಮೈಗೊಟ್ಟನಯ್ಯಾ ನಿರಾಕಾರಕ್ಕೆ. ಗುರು ನೋಡುವಡೆ, ಭವದ ಬೇರು ಅಳಿಯಬೇಕೆಂದು ಸಾಕಾರವಾಗಿ ನಿಂದ ನೋಡಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.