Index   ವಚನ - 1408    Search  
 
ಮಾಡುವೆನಯ್ಯಾ ಪೂಜೆಗೆಂದು ದ್ರವ್ಯನಾಶವನು. ನೋಡುವೆನಯ್ಯಾ ಲಿಂಗಸಂಭ್ರಮಕೆಂದು ಪೂದೋಟಗಳ. ಹಾಡುವೆನಯ್ಯಾ ನಾಟ್ಯರಚನೆಗೆಂದು ಗಾನವ. ಕೂಡುವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ ಇಷ್ಟಲಿಂಗದಲ್ಲಿ.