•  
  •  
  •  
  •  
Index   ವಚನ - 1411    Search  
 
ನೋಡಯ್ಯಾ, ನೋಡಯ್ಯಾ, ಲಿಂಗದ ಮಹಿಮೆಯ; ತಾನು ಸೋಂಕಿ ಎನ್ನ ಕಳೆದ, ಎನ್ನ ಸೋಂಕಿ ತಾನೆ ಉಳಿದ. ನೋಡಯ್ಯಾ, ನೋಡಯ್ಯಾ, ಲಿಂಗದ ಮಹಿಮೆಯ: ತಾನೆಂಬುದನುಳುಹದೆ ನಿಶ್ಶೂನ್ಯವಾಗಿ ನಿಂದ ನೋಡಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nōḍayyā, nōḍayya, liṅgada mahimeya; tānu sōṅki enna kaḷeda, enna sōṅki tāne uḷida. Nōḍayya, nōḍayya, liṅgada mahimeya: Tānembudanuḷuhade niśśūn'yavāgi nindu nōḍayyā, ele kapilasid'dhamallikārjunā.