ಅರಿವೆನೆಂದಡೆ `ಸತ್ಯಂ ಜ್ಞಾನಮನಂತಂ ಬ್ರಹ್ಮ'
ಎಂಬ ಶ್ರುತಿ ಸಾರುತ್ತಿದೆ.
ಮರೆವೆನೆಂದಡೆ `ಸಾಕ್ಷಾತ್ ಸಚ್ಚಿದಾನಂದಂ ಬ್ರಹ್ಮ'
ಎಂಬ ಕೈವಲ್ಯೋಪನಿಷತ್ ಘೋಷಿಸುತ್ತಿದೆ.
ಅರಿವು ವಸ್ತುಸ್ವರೂಪ, ಮರವು ಮಾಯಾಸ್ವರೂಪವೆಂದಡೆ
ಆನು ನಿರ್ವಯಲ ಸ್ವರೂಪನಾದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Arivenendaḍe `satyaṁ jñānamanantaṁ brahma'
emba śruti sāruttide.
Marevenendaḍe `sākṣāt saccidānandaṁ brahma'
emba kaivalyōpaniṣattu prakaṭavāguttide.
Arivu vastusvarūpa, maravu māyāsvarūpavendaḍe
ānu nirvayala svarūpanāde nōḍā,
kapilasid'dhamallikārjunā.