ವಚನ - 1437     
 
ತನು ಕೊಟ್ಟು ಭಕ್ತನಾದೆಹೆನೆಂದಡೆ, ತನು ಮಲಭಾಂಡವಯ್ಯಾ. ಮನ ಕೊಟ್ಟು ಭಕ್ತನಾದೆಹೆನೆಂದಡೆ, ಮನ ವಾಯುಮಿತ್ರನಯ್ಯಾ. ಧನ ಕೊಟ್ಟು ಭಕ್ತನಾದೆಹೆನೆಂದಡೆ, ಎನ್ನ ಬಂಧುಗಳ ಭಾವ ಅದರಲ್ಲಯ್ಯಾ. ಇವೆಲ್ಲ ಅಶುದ್ಧ ಪದಾರ್ಥಂಗಳ ಕೊಟ್ಟು ಭಕ್ತನಾಗುವೆನೆ? ಆಗಲರಿಯೆನು. ಮಾಡಿ ಮಾಡಿ ಭಕ್ತನಾಗಿಹೆನೆಂಬವರಿಗೆ ಕೊಟ್ಟು ಭಕ್ತನಾಗುವೆನೆಂದಡೆ, ನೀವೆಯಾಗಿ ನಿಂದಲ್ಲಿ ಕೊಡಲಿಕ್ಕಿಂಬಿಲ್ಲಾ, ತೆಗೆದುಕೊಂಬುವಡೆ ಹಸ್ತವಿಲ್ಲಾ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ.