•  
  •  
  •  
  •  
Index   ವಚನ - 1438    Search  
 
ಭೂಷಣವುಳ್ಳ ಜಂಗಮವ ಭೂಪಾಲ ಪೂಜಿಸುವ; ವೇಷವುಳ್ಳ ಜಂಗಮವ ವೇಶಿ ಪೂಜಿಸುವಳು; ವೇಷಧಾರಿ ಜಂಗಮವ ಲೋಕವೆಲ್ಲ ಪೂಜಿಸುವುದು; ಜ್ಞಾನವುಳ್ಳ ಜಂಗಮವನಾರು ಪೂಜಿಸರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhūṣaṇavuḷḷa jaṅgamava bhūpāla pūjisuva; vēṣavuḷḷa jaṅgamava vēśi pūjisuvaḷu; vēṣadhāri jaṅgamava lōkavella pūjisuvudu; jñānavuḷḷa jaṅgamavanāru pūjisaru nōḍā, kapilasid'dhamallikārjunā.