ಅಂಗವೇ ಲಿಂಗವಾಗಿಹೆನೆಂಬವನ
ಭಾವ ಇದರಲ್ಲೇ ನಿಶ್ಚಯ
ನೋಡಾ, ಮನವೆ
ಸ್ತುತಿ ನಿಂದೆಗಳಲ್ಲಿ ಹರ್ಷರೋಷಗಳಿಲ್ಲದಿರಬೇಕು.
ನೀಚಾನೀಚ ಗುಣವ ನೋಡದೆ ನ[ಮ್ರ]
ಭಾಷಾವಂತನಾಗಬೇಕು.
ಸರ್ವ ಜೀವಿಗಳ ತನ್ನಂತೆ ತಿಳಿದು ನೋಡಬೇಕು.
ಸಂಶಯಾಸಂಶಯವಳಿದು ನಿಶ್ಚಿಂತನಾಗಬೇಕು.
ಆಕಾಶದ ಬೆಳಗಿನ ಬೆಳಗ ನೋಡಿ
ಬೆಳಗುಮಯನಾಗಬೇಕು ನೋಡಾ.
ಎಲೆ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Art
Manuscript
Music
Courtesy:
Transliteration
Aṅgavē liṅgavāgihenembavana
bhāva idarallē niścaya
nōḍā, manave
stuti nindegaḷalli harṣarōṣagaḷilladirabēku.
Nīcānīca guṇava nōḍade na[mra]
bhāṣāvantanāgabēku.
Sarva jīvigaḷu tannante tiḷidu nōḍabēku.
Sanśayāsanśayavaḷidu niścintanāgabēku.
Ākāśada beḷagina beḷagina nōḍi
beḷagumayanāgabēku nōḍā.
Ele manave, kapilasid'dhamallikārjunanalli.