ವಚನ - 1454     
 
ಲಿಂಗ ಘನವೆಂಬೆನೆ? ಕಲ್ಲಿನ ಮಗ; ಪಾದೋದಕ ಘನವೆಂಬೆನೆ? ಇಂದ್ರನ ಮಗ; ಪ್ರಸಾದ ಘನವೆಂಬೆನೆ? ಶೂದ್ರನ ಮಗ; ವಿಭೂತಿಯ ಘನವೆಂಬೆನೆ? ಗೋವಿನ ಮಗಳು. ಇವೆಲ್ಲ ಒಂದೊಂದರಿಂದ ಜನನವಾಯಿತ್ತು; ನೀವಾರಿಂದ ಜನನವಾದಿರಿ ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನಾ.