ಕಲ್ಲು ಘನವೆಂದಡೆ, ಲಿಂಗದ ಪೂಜ್ಯತ್ವ ಕಲ್ಲಿಗೆ ಬಂದಿತೇನಯ್ಯಾ?
ನೀರು ಘನವೆಂದಡೆ, ಪಾದೋದಕಕ್ಕೆ ಸರಿಬಂದಿತೇನಯ್ಯಾ?
ಶೂದ್ರ ಘನವೆಂದಡೆ, ಅಷ್ಟೈಶ್ವರ್ಯ ಕೊಟ್ಟಿತೇನಯ್ಯಾ?
ಘನಕ್ಕೆ ಘನವು ನಿಮ್ಮಷ್ಟಾವರಣಂಗಳು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kallu ghanavendaḍe, liṅgada pūjyatva kallige banditēnayyā?
Nīru ghanavendaḍe, pādōdakakke saribanditēnayyā?
Śūdra ghanavendaḍe, aṣṭaiśvarya koṭṭitēnayyā?
Ghanakke ghanavu nim'maṣṭāvaraṇagaḷu nōḍā,
kapilasid'dhamallikārjunā.