ವಚನ - 1457     
 
ಅನುಭವವಾಗಲೆಂದು ಬಂದು ಘನವಾಗಿ ಒಂದು ಕಿರಿದಾಗಿ ಹೇಳಿದೆನಲ್ಲದೆ, ಲಿಂಗವ ಕಿರಿದಾಗಿ ಹೇಳಿದೆನೆ ಅಯ್ಯಾ? ನೀರಲ್ಲಿದ್ದ ತೆರೆಗಳೆಲ್ಲ ನೀರಲ್ಲವೆ ʼಲಿಂಗಮಧ್ಯೇ ಜಗತ್ಸರ್ವಂ' ಎಂದ ಬಳಿಕ? ಪಾಷಾಣಂಗಳೆಲ್ಲ ಲಿಂಗಂಗಳು, ಲಿಂಗಂಗಳೆಲ್ಲ ಪಾಷಾಣಂಗಳು. `ಶ್ರೀಶೈಲೇ ವಸತೀ ಶಿಲಾ ಶಿವಮಯೀ ಸತ್ಯಂ ಶಿವೇ' ಎಂಬ ಶಿವವಾಕ್ಯವದು ಪುಸಿಯೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.