•  
  •  
  •  
  •  
Index   ವಚನ - 1459    Search  
 
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು. ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Liṅga jaṅgama ondāda baḷika liṅgārcane salladu jaṅgamakke. Liṅgārcane bēku bhaktaṅge. Liṅgārcanevirahita bhaktana mukha nōḍalāgadu, nuḍisalāgadu. Avana horeyalliralāgadayyā, kapilasid'dhamallikārjunā.