Index   ವಚನ - 1466    Search  
 
ತಪವ ಮಾಡಿ ಸ್ವರ್ಗವ ಪಡೆದೆಹೆನೆಂಬವನ ಮುಖವ ನೋಡಲಾಗದು. ಮಾದಿಗ ಡೋಹರ ಶ್ವಪಚ ನೀಚಗುಣವುಳ್ಳವರು ಹೋಹುದೆಲ್ಲ ಸ್ವರ್ಗವೇನಯ್ಯಾ? ಲಿಂಗದ ಕುರುಹ ತಿಳಿದು, ಅಂಗಗುಣಂಗಳನತಿಗಳೆದು ಲಿಂಗವಾದುದೆ ಸ್ವರ್ಗ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.