Index   ವಚನ - 1469    Search  
 
ಹದಿನಾಲ್ಕು ರತ್ನವೆಂಬುದ ಸುರಾಸುರರೆಲ್ಲರು ಬಲ್ಲರು ಮೂರಾರು ರತ್ನವನಾರು ಅರಿಯರಯ್ಯಾ; ಮೂರಾರು ರತ್ನವೆಂಬುದ ಬಲ್ಲರು ದಿವ್ಯಮುನಿಗಳು. ಮೂರೆರಡು ರತ್ನವನರಿಯರು ತ್ರಿಲೋಕದವರು; ಮೂರೆರಡು ರತ್ನವ ಬಲ್ಲರು ಮಹಾಪ್ರಮಥರು. ಒಂದು ರತ್ನವನಾರು ಅರಿಯರು; ಒಂದು ರತ್ನವ ಬಲ್ಲವ ನಿಮ್ಮ ಶರಣ ಮಹಾಲಿಂಗಮೂರ್ತಿ ಚೆನ್ನಬಸವಣ್ಣ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.