ವಚನ - 1472     
 
ಅಯ್ಯಗಳು ಬಂದಿಹರೆಂದು `ಅಯ್ಯಾ ಅಯ್ಯಾ' ಎಂದು ಬೆಂಬತ್ತುವನಲ್ಲ ನಾನು. ಅಯ್ಯಗಳೆಂದಡೆ ಅಯ್ಯತನವೇರಿತ್ತೆ ದೇವಾ? ಗೋವಿನ ಹಾಲು ಎಂದಡೆ, ಹಿಂಡಲಿಲ್ಲ, ರುಚಿಸಲಿಲ್ಲ. ತನ್ನ ಹಸ್ತ ಮುಟ್ಟಿದಲ್ಲಿ ರುಚಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.