ಅಯ್ಯಗಳ ಅನುಭವಕ್ಕಲ್ಲದೆ
ನಿನ್ನ ಪಾಪಕ್ಕವರು ಅಯ್ಯಗಳೆ?
ಅಯ್ಯಗಳನುಭಾವ
ನಿನ್ನ ಮನೋಭಾವ ಏಕವಾದಡೆ,
ಅಯ್ಯತನವೇರಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ayyagaḷa anubhavakkallade
ninna pāpakkavaru ayyagaḷē?
Ayyagaḷanubhāva
ninna manōbhāva ēkavādaḍe,
ayyatanavērittayyā,
kapilasid'dhamallikārjunā.