Index   ವಚನ - 1492    Search  
 
ತೋರಿ ಕೆಡುವ ದೇಹ ನಾನೆಂದು ನಂಬದಿರಾ ಮನವೆ. ತೋರುವ ಅರಿವು ನಾನೆಂದು ನಂಬು ಕಂಡೆಯಾ ಮನವೆ. ತೋರಿ ಕೆಡುವುದು ಮಾಯಾತ್ಮಕವು ಮನವೆ. ತೋರಿ ತೋರುವುದದು ನಿರುಪಾಧಿಕ, ನಿಜಾನಂದ, ಕಪಿಲಸಿದ್ಧಮಲ್ಲಿಕಾರ್ಜುನ, ಕಂಡೆಯಾ ಮನವೆ.