ಗೆದ್ದವ ಗರಡಿಕಾರನಲ್ಲದೆ ಬಿದ್ದು
ಎದ್ದವ ಗರಡಿಕಾರನೆ ಅಯ್ಯಾ?
ಎದ್ದವ ಜಂಗಮವಲ್ಲದೆ ಬಿದ್ದು
ಎದ್ದವ ಜಂಗಮವೆ ಅಯ್ಯಾ?
ಬೀಳಲಾಗದು ಜಂಗಮ;
ಬೀಳಲಾಗದು ಜಗದ ಹಿರಿಯರು,
ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Geddava garaḍikāranallade biddu
eddava garaḍikārane ayyā?
Eddava jaṅgamavallade biddu
eddava jaṅgamave ayyā?
Bīḷalāgada jaṅgama;
bīḷalāgada jagada hiriyaru,
ayya, kapilasid'dhamallikārjunā.