Index   ವಚನ - 1544    Search  
 
ವಿಟ ಬಂದಾನೆಂದು ನಟನೆಗಾರ್ತಿ ತಾ ವಿಟಸಂಪನ್ನೆಯಾದಳವ್ವಾ. ವಿಟ ಬಾರದಿದ್ದಡೆ, ತಾ ಸಿಡಿಮಿಡಿ [ಗೊಂಡ]ಬ್ಬರ ನೋಡವ್ವಾ, ಇದರ ತೋಟಿಯ ಕಳೆಯಬಂದಡೆ ನಿನ್ನ ತೋಟಿ ಕೆಟ್ಟಿತ್ತೆಲಗವ್ವಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಜಾರನಲ್ಲಿ.