Index   ವಚನ - 1551    Search  
 
ಕೃಸರಪದಾರ್ಥ ಕೃಷೀವಲರುಂಡರೆಂದಡೆ ಆಶ್ಚರ್ಯವೇನಯ್ಯಾ? ನೃಪನುಂಡನೆಂದಡೆ ಆಶ್ಚರ್ಯ. ಚರ್ಯಾತೀತ ಉಂಡನೆಂದಡೆ ಬಹು ಆಶ್ಚರ್ಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.