ಭೂಪಾಲನ ಕುದುರೆಯ ಗೋಪಾಲನೇರಿದಡೆ,
ಮನ್ನಣೆಯಲ್ಲದೆ ಅಮನ್ನಣೆಯೇನಯ್ಯಾ?
ಗೋಪಾಲನ ಕುದುರೆಯ ಭೂಪಾಲನೇರಿದಡೆ,
ಅಮನ್ನಣೆಯಲ್ಲದೆ ಮನ್ನಣೆಯೇನಯ್ಯಾ?
ಭೂಪನ ವೇಷ ಗೋಪಂಗಾದುದು,
ಗೋಪನ ವೇಷ ಭೂಪಂಗಾದುದು
ಪಾಪದ ಕೇಡು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhūpālana kudureya gōpālanēridaḍe,
mannaṇeyallade amannaṇeyēnayyā?
Gōpālana kudureya bhūpālanēridaḍe,
amannaṇeyallade mannaṇeyēnayyā?
Bhūpana vēṣa gōpāṅgādudu,
gōpana vēṣa bhūpaṅgādudu
pāpada kēḍu nōḍā,
kapilasid'dhamallikārjunā.