Index   ವಚನ - 1573    Search  
 
ಅಟ್ಟುಂಬುದು ಪ್ರಸಾದವಾದಡೆ, ಇದ್ದ ಪ್ರಾಣಿಗಳೆಲ್ಲ ಮೋಕ್ಷವಂತರಾಗಬಾರದೇನೊ ಅಯ್ಯಾ? ಅಟ್ಟುಂಬುದದು ಭೂತ! ಅಡದೆ ಉಣದೆ ನಿಜವಡಗಿದ ರೂಹ ಅರಿಯಬಲ್ಲಡೆ, ಅದು ಮಹಾಪ್ರಸಾದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.