ಗುರು ಮುಟ್ಟಿ ಬಂದ ಶುದ್ಧ ಪ್ರಸಾದಿಯಾದಡೆ,
ವಾತ ಪಿತ್ತ ಶ್ಲೇಷ್ಮವಳಿದಿರಬೇಕು.
ಲಿಂಗ ಮುಟ್ಟಿ ಬಂದ ಸಿದ್ಧ ಪ್ರಸಾದಿಯಾದಡೆ,
ಆದಿವ್ಯಾಧಿಗಳಿಲ್ಲದಿರಬೇಕು.
[ಜಂಗಮ ಮುಟ್ಟಿ ಬಂದ ಪ್ರಸಿದ್ಧ ಪ್ರಸಾದಿಯಾದಡೆ,
ಅಜ್ಞಾನರೋಗವಿಲ್ಲದಿರಬೇಕು.]
ಮೂರರ ಅರುಹು ಗಟ್ಟಿಗೊಳ್ಳುವ
ಮಾಹಾಪ್ರಸಾದಿಯಾದಡೆ,
ಮರಣವಿಲ್ಲದಿರಬೇಕು.
ಪ್ರಸಾದ ಪ್ರಸಾದವೆಂದು ತ್ರಿವಿಧ ಪ್ರಸಾದವ ಸೇವಿಸಿ,
ಸರ್ವರಂತೆ ಮಲತ್ರಯಕ್ಕೊಳಗಾಗುವರ
ಪ್ರಸಾದಿಗಳೆಂದು ನಂಬದಿರಾ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ ಕಬ್ಬಿಲರಿರಾ.
Transliteration Guru muṭṭi banda śud'dha prasādiyādaḍe,
vāta pitta ślēṣmavaḷidirabēku.
Liṅga muṭṭi banda sid'dha prasādiyādaḍe,
ādivyādhigaḷilladirabēku.
[Jaṅgama muṭṭi banda prasid'dha prasādiyādaḍe,
jñānarōgavilladirabēku.]
Mūrara aruhu gaṭṭigoḷḷuva
mahāprasādiyādaḍe,
maraṇavilladirabēku.
Prasāda prasādavendu trividha prasādava sēvisi,
sarvarante malatrayakkoḷagāguvara
prasādigaḷendu nambadirā,
kapilasid'dhamallikārjuna sākṣiyāgi kabbilarirā.