Index   ವಚನ - 1574    Search  
 
ಗುರು ಮುಟ್ಟಿ ಬಂದ ಶುದ್ಧ ಪ್ರಸಾದಿಯಾದಡೆ, ವಾತ ಪಿತ್ತ ಶ್ಲೇಷ್ಮವಳಿದಿರಬೇಕು. ಲಿಂಗ ಮುಟ್ಟಿ ಬಂದ ಸಿದ್ಧ ಪ್ರಸಾದಿಯಾದಡೆ, ಆದಿವ್ಯಾಧಿಗಳಿಲ್ಲದಿರಬೇಕು. [ಜಂಗಮ ಮುಟ್ಟಿ ಬಂದ ಪ್ರಸಿದ್ಧ ಪ್ರಸಾದಿಯಾದಡೆ, ಅಜ್ಞಾನರೋಗವಿಲ್ಲದಿರಬೇಕು.] ಮೂರರ ಅರುಹು ಗಟ್ಟಿಗೊಳ್ಳುವ ಮಾಹಾಪ್ರಸಾದಿಯಾದಡೆ, ಮರಣವಿಲ್ಲದಿರಬೇಕು. ಪ್ರಸಾದ ಪ್ರಸಾದವೆಂದು ತ್ರಿವಿಧ ಪ್ರಸಾದವ ಸೇವಿಸಿ, ಸರ್ವರಂತೆ ಮಲತ್ರಯಕ್ಕೊಳಗಾಗುವರ ಪ್ರಸಾದಿಗಳೆಂದು ನಂಬದಿರಾ, ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ ಕಬ್ಬಿಲರಿರಾ.