ಕರಣಾದಿಗಳೆಲ್ಲ ಪರಶಿವನೆಂದ ಬಳಿಕ,
ಆ ಕರಣಾದಿಗಳ `ಭೋಜನ ಕೊಳ್ಳು' ಎನಬಾರದೆಂದು,
`ಪರಶಿವಪ್ರಸಾದ' ಎಂಬ ನಾಮವಿಟ್ಟನಯ್ಯಾ ಶ್ರೀಗುರು.
ಆ ಕಾರಣ ಬಂದ ಪ್ರಸಾದವೆಲ್ಲ ಶಿವಪ್ರಸಾದವೆಂದು
ಭುಂಜಿಸಬೇಕಲ್ಲದೆ,
ಕಟು ಆಮ್ಲ ತಿಕ್ತವೆಂದು ಭೋಗಿಸಿದಡೆ,
ಭವ ತಪ್ಪದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karaṇādigaḷella paraśivanenda baḷika,
ā karaṇādigaḷa `bhōjana koḷḷu' enabāradendu,
`paraśivaprasāda' emba nāmaviṭṭanayyā śrīguru.
Ā kāraṇa banda prasādavella śivaprasādavendu
bhun̄jisabēkallade,
kaṭu āmla tiktavendu bhōgisidaḍe,
bhava tappadu nōḍā,
kapilasid'dhamallikārjunā.