Index   ವಚನ - 1576    Search  
 
ಮಜ್ಜಿಗೆ ಹುಳಿ ಎಂದಡೆ ಅದು ಗೊಜ್ಜಿನ ಹಾದಿ ನೋಡಾ, ಮನವೆ. ಸಜ್ಜಿಕ ಸ್ವಾದುವೆಂದಡೆ, ಕಜ್ಜಿಯ ತಿಂಡಿಯಂತೆ ಕಾಣಾ, ಮನವೆ. ಸ್ವಾದ ಹುಳಿ ಶಿವಸ್ವರೂಪವೆಂದಡೆ ಮಹಾಪ್ರಸಾದವಾಯಿತ್ತು, ಎನ್ನ ಗುರು ಚೆನ್ನಬಸವಣ್ಣಂಗೆ ಕಾಣಾ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನಾ.