ವಚನ - 1578     
 
ನೆಲೆಗೊಳ್ಳದು ಎಂದು ಬಿಡಬಾರದಯ್ಯಾ. ನೆಲೆಯದು ನೆಲೆಯದು ಎಂದು ಅನುಭವಿಸಬೇಕಯ್ಯಾ. ನೆಲೆಯಿಲ್ಲದದು ನೆಲೆಯಲ್ಲಿಹುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.