ವಚನ - 1579     
 
ಕಲ್ಲು ನೀರಲ್ಲಿದ್ದಂತಲ್ಲದೆ, ನೀರ ನುಂಗಿ ನೀರಾಗಬಹುದೆ ಅಯ್ಯಾ? ಅಗ್ನಿ ನೀರಲ್ಲಿದ್ದಂತಲ್ಲದೆ, ನೀರ ನುಂಗಿ ನೀರಾಗಬಹುದೆ, ಅಯ್ಯಾ? ಪ್ರಸಾದಿ ಭವದಲ್ಲಿದ್ದಂತಲ್ಲದೆ, ಭವ ನುಂಗಿ ಭವಿಯಾಗಬಹನೆ, ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?