ಒಂದೆ ವಸ್ತು ಅವಸ್ಥಾತ್ರಯ ಕಿಂಚಿಜ್ಞತ್ವ
ಹೊಂದಿ ಜೀವನೆನಿಸಿತ್ತಯ್ಯಾ,
ಆ ಜೀವ ಕರ್ತೃತ್ವಭೋಕ್ತೃತ್ವಕ್ಕೆ ಒಳಗಾಗಿ
`ದೇಹ ನಾನು' ಎಂದಿತ್ತಯ್ಯಾ.
`ದೇಹ ನಾನು' ಎಂಬುವ ವಾಸನೆಯೊಳಗಾಗಿ,
ಕಾಲತ್ರಯಕ್ಕೊಳಗಾಗಿ, ಅಸ್ವತಂತ್ರನಾಗಿ ನೆಲಸಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ondē vastu avasthātraya kin̄cijñatva
hondi jīvanenisittayyā,
ā jīva kartr̥tvabhōktr̥tvakke oḷagāgi
`dēha nānu' endittayyā.
`Dēha nānu' embuva vāsanegāgi,
kālatrayakkoḷagāgi, asvatantranāgi nelasittu nōḍā,
kapilasid'dhamallikārjunā.